ದಿತಿದೇವಿಯ ನಲವತ್ತೊಂಭತ್ತು ಮಕ್ಕಳು
ಕಶ್ಯಪರು ಬ್ರಹ್ಮರ್ಷಿಗಳು. ಲೋಕಕಲ್ಯಾಣಕ್ಕಾಗಿ ಅವರಷ್ಟು ತ್ಯಾಗವನ್ನು ಯಾರೂ ಮಾಡಿಲ್ಲ. ಅವರು ದೇವತೆಗಳ, ದೈತ್ಯರ, ಪಕ್ಷಿ, ಪ್ರಾಣಿ, ಸರ್ಪ, ಗಿಡ-ಬಳ್ಳಿ ಮುಂತಾದ ಎಲ್ಲ ಜೀವಿಗಳ ವಂಶಕ್ಕೆ ಕಾರಣರಾಗಿದ್ದಾರೆ. ಅವರಿಗೆ ಒಟ್ಟು ಹದಿಮೂರು ಜನ ಮಡದಿಯರು. ಅದಿತಿ ಮೊದಲ ಹೆಂಡತಿ. ನಂತರ ದಿತಿ, ದನು, ಅರಿಷ್ಟಾ, ಸುರಸಾ, ಖಷಾ, ಸುರಭಿ, ವಿನುತಾ, ತಾಮ್ರಾ, ಕ್ರೋಧವಶಾ, ಇರಾ, ಕದ್ರು, ಮತ್ತು ಮುನಿ.
![]() |
| ದಿತಿದೇವಿಯ ಮನೆಗೆ ಹೊರಟಿರುವ ಇಂದ್ರದೇವ |
ಇತ್ತ ದಿತಿದೇವಿಯು ಕಶ್ಯಪರಿಗೆ ಕೊಟ್ಟ ಮಾತಿನ ಪ್ರಕಾರ ವೃತನಿಷ್ಠಳಾಗಿ ಬಹಳ ಜತನದಿಂದ ಗರ್ಭಸ್ಥ ಮಗುವನ್ನು ಕಾಪಾದಿಕೊಂದಿದ್ದಳು. ಹೇಗೋ ವಿಷಯವು ಇಂದ್ರನಿಗೆ ತಿಳಿಯಿತು. ತನಗೆ ಶತ್ರುವಾಗಲಿರುವ ಮಗುವನ್ನು ಹೇಗಾದರೂ ಮಾಡಿ ನಾಶ ಮಾಡಬೇಕೆಂದು ಅವನು ಉಪಾಯ ಮಾಡಿದನು. ಬಾಲ ಸೇವಕನ ವೇಷ ಧರಿಸಿ ಅವನು ದಿತಿಯ ಹತ್ತಿರ ಕೆಲಸಕ್ಕೆ ಸೇರಿದನು. ಕಶ್ಯಪರು ಹೇಳಿದ ನೂರು ವರ್ಷಗಳಲ್ಲಿ ತೊಂಭತ್ತು ವರ್ಷಗಳು ಸರಿಯಾಗಿ ನಡೆದವು.ಇಂದ್ರನು ಬಹಳ ಸಮಾಧಾನದಿಂದ ಅಲ್ಲಿಯೇ ಸೇವಕನ ವೇಷದಲ್ಲಿದ್ದು ದಿತಿದೇವಿಯಿಂದ ವೃತಾಚರಣೆಯಲ್ಲಿ ಸ್ವಲ್ಪವಾದರೂ ಲೋಪವಾದರೆ ಸಾಕು, ಗರ್ಭಸ್ಥ ಮಗುವನ್ನು ಅದೇ ನೆವದಿಂದ ಕೊಂದುಬಿಡಲು ಆಲೋಚಿಸುತ್ತಿದ್ದನು.
![]() |
| ಮರುತ ಗಣ ದೇವತೆಗಳು |
ತನ್ನ ವಜ್ರಾಯುಧದಿಂದ ದಿತಿಯ ಹೊಟ್ಟೆಯಲ್ಲಿದ್ದ ಪಿಂಡಕ್ಕೆ ಬಲವಾಗಿ ಹೊಡೆದಾಗ ಅದು ಏಳು ತುಂಡುಗಳಾಯಿತು. ವಜ್ರಾಯುಧದ ಆಘಾತದ ನೋವನ್ನು ತಾಳಲಾರದೆ ಅವು ಒಂದೇ ಸವನೆ ರೋದಿಸತೊದಗಿದವು. ಆಗ ಇಂದ್ರನು ಅವುಗಳನ್ನು ಸಮಾಧಾನಿಸುತ್ತಾ 'ಮಾರೋದಿಹಿ'(ಅಳಬೇಡಿ) ಎಂದು ಹೇಳುತ್ತಾ ಮತ್ತೊಮ್ಮೆ ವಜ್ರಾಯುಧದಿಂದ ಪ್ರಹಾರ ಮಾಡುತ್ತಾನೆ. ಈ ಸಲ ಏಟು ಬಹಳ ಪ್ರಬಲವಾದ್ದರಿಂದ ಒಂದೊಂದು ತುಂಡು ಏಳು ಹೋಳಾಗಿ ಒಟ್ಟು ನಲವತ್ತೊಂಭತ್ತು ತುಂಡುಗಳಾಗಿ ಎಲ್ಲವೂ ಮತ್ತಷ್ಟು ಜೋರಾಗಿ ಅಳತೊಡಗುತ್ತವೆ. ಇಂದ್ರನು ಪುನಃ 'ಮಾರೋದಿಹಿ" ಎಂದು ಸಮಾಧಾನ ಮಾಡಿ ದಿತಿಯ ಉದರದಿಂದ ಹೊರಗೆ ಬಂದುಬಿಡುತ್ತಾನೆ.
ನಂತರ ದಿತಿದೇವಿಯು ೪೯ ಜನ ಅತ್ಯಂತ ತೇಜೋವಂತರಾದ ಮಕ್ಕಳನ್ನು ಹೆರುತ್ತಾಳೆ. ದಿವ್ಯ ದೃಷ್ಟಿಯಿಂದ ಎಲ್ಲವನ್ನೂ ತಿಳಿದುಕೊಂಡ ಕಶ್ಯಪರು ಅಲ್ಲಿಂದಲೇ ಮಕ್ಕಳನ್ನು ಆಶೀರ್ವದಿಸುತ್ತಾರೆ. ಅವರ ಪ್ರಭಾವದಿಂದಾಗಿ ಇಂದ್ರನ ಮೇಲಿದ್ದ ಅವಳ ದ್ವೇಷವು ಹೊರಟುಹೋಗುತ್ತದೆ. ಇದನ್ನರಿತ ಇಂದ್ರ ದಿತಿದೇವಿಯ ಮಕ್ಕಳಿಗೆ ತನ್ನ ಅಮೃತ ಹಸ್ತವನ್ನು ಕೊಟ್ಟು ಕಾಪಾಡುತ್ತಾನೆ. ಇಂದ್ರನು 'ಮಾರೋದಿಹಿ' ಎಂದು ಮಕ್ಕಳನ್ನು ಸಮಾಧಾನಿಸಿದ್ದರಿಂದ ಹುಟ್ಟಿದ ೪೯ ಮಕ್ಕಳ ಗುಂಪು ಮರುತ ಗಣ ದೇವತೆಗಳು ಎಂದು ಪ್ರಸಿದ್ಧರಾಗುತ್ತಾರೆ. ಹೀಗೆ ದಿತಿದೇವಿಯು ವೃತ ಲೋಪ ಮಾಡಿದರೂ ಕಶ್ಯಪರ ಅನುಗ್ರಹದಿಂದ ಒಳ್ಳೆಯದೇ ಆಗುತ್ತದೆ. ಇಂದ್ರನ ಶತ್ರುಗಳಾಗಬೇಕಿದ್ದವರೆಲ್ಲ ಅವನ ಮಿತ್ರರಾಗಿ ದೇವಲೋಕವನ್ನು ಸೇರುತ್ತಾರೆ. ಹೀಗೆ ದಿತಿದೇವಿಯಲ್ಲಿ ಕಶ್ಯಪರಿಂದ ದೇವಗಣವೊಂದು ಹುಟ್ಟಿ ಅವಳಿಗೆ ಬಹುವಾಗಿ ಸಂತೋಷವಾಗುತ್ತದೆ.


ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ