ಸೂರ್ಯ-ಸಂಜ್ಞಾ-ಛಾಯಾ
ಸೂರ್ಯ ಅತ್ಯಂತ ತೇಜಸ್ವಿ ದೇವತೆ. ಅವನು ಸಾಕ್ಷಾತ್ ಭಗವಾನ್ ನಾರಾಯಣನ ಸ್ವರೂಪ. ದೇವತೆಗಳ ಬಡಗಿಯಾದ ವಿಶ್ವಕರ್ಮನಿಗೆ ಸಂಜ್ಞಾ ಎಂಬ ಸುಂದರ, ಸುಶೀಲ ಮಗಳು ಇರುತ್ತಾಳೆ. ಸೂರ್ಯದೇವನ ತೇಜಸ್ಸಿಗೆ ಮಾರುಹೋದ ವಿಶ್ವಕರ್ಮ ತನ್ನ ಮಗಳು ಸಂಜ್ಞಾಳನ್ನು ಸೂರ್ಯನಿಗೆ ಕೊಟ್ಟು ಮದುವೆ ಮಾಡುತ್ತಾನೆ. ಸೂರ್ಯ ಹಾಗೂ ಸಂಜ್ಞಾರಿಗೆ ಮೂರು ಮಕ್ಕಳು ಹುಟ್ಟುತ್ತಾರೆ. ಮೊದಲನೆಯ ಮಗ ಮನು, ಆಮೇಲೆ ಅವಳಿ ಜವಳಿ ಮಕ್ಕಳು ಯಮ ಮತ್ತು ಯಮಿ. ಬರಬರುತ್ತಾ ಸೂರ್ಯನ ತೇಜಸ್ಸು ಹೆಚ್ಚತೊಡಗುತ್ತದೆ. ಸಂಜ್ಞಾ ಬಲು ಸೂಕ್ಷ್ಮ ಹೆಂಗಸು ಅವಳಿಗೆ ಸೂರ್ಯನ ಪ್ರಖರ ತೇಜಸ್ಸನ್ನು ತಾಳಿಕೊಳ್ಳಲು ಸಾಧ್ಯವಾಗುವುದಿಲ್ಲ. ಗಂಡ ತೇಜಃಪುಂಜನಾದಷ್ಟೂ ಸಂಜ್ಞಾಳಿಗೆ ಹಿಂಸೆಯಾಗತೊಡಗುತ್ತದೆ.
ಛಾಯಾದೇವಿಯು ತನಗೆ ಮಕ್ಕಳಾಗುವವರೆಗೆ ಸವತಿಯ ಮಕ್ಕಳನ್ನು ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದಳು. ತನಗೂ ಮಕ್ಕಳಾದ ಮೇಲೆ ಸಂಜ್ಞೆಯ ಮಕ್ಕಳನ್ನು ಅಸಡ್ಡೆಯಿಂದ ನೋಡಲಾರಂಭಿಸುತ್ತಾಳೆ. ಒಂದು ಸಲ ತನ್ನ ಮಕ್ಕಳೂ ಸವತಿಯ ಮಕ್ಕಳೂ ಜಗಳ ಮಾಡಲಾರಂಭಿಸಿದಾಗ ಸಾರಾಸಾರ ವಿಚಾರ ಮಾಡದೆ ತನ್ನ ಸ್ವಂತ ಮಕ್ಕಳ ಪರವಾಗಿ ನಿಂತು ಮಲಮಗ ಯಮನನ್ನು ಚೆನ್ನಾಗಿ ದಂಡಿಸಿ ಶಾಪ ಕೊಟ್ಟುಬಿಡುತ್ತಾಳೆ.
ಪ್ರಸಂಗ ಶಾಪ ಕೊಡುವಷ್ಟು ವಿಕೋಪಕ್ಕೆ ಹೋದಾಗ ಸೂರ್ಯನಿಗೆ ಸಂಶಯ ಬರುತ್ತದೆ. ಸ್ವಂತ ಮಗನಿಗೆ ಕೇಡು ಬಯಸಿ ಯಾರಾದರೂ ಶಾಪ ಕೊಡುವುದು ಉಂಟೆ? ಇವಳು ಯಮನಿಗೆ ತಾಯಿಯೇ ಆಗಿರಲಿಕ್ಕಿಲ್ಲವೆಂದುಕೊಂಡು ಅವಳನ್ನು ಗದರಿಸಿ ಕೇಳಿದಾಗ ಛಾಯಾದೇವಿಯು ನಡೆದ ಸಮಾಚಾರವನ್ನು ವಿವರವಾಗಿ ತಿಳಿಸಿಬಿಡುತ್ತಾಳೆ. ಬೆಂಕಿಯ ಬೆಟ್ಟದಂತಿರುವ ನಿಮ್ಮ ಉರಿಯ ಅಪ್ಪುಗೆಯಿಂದ ತಪ್ಪಿಸಿಕೊಳ್ಳಲು ನನ್ನನ್ನು ಇಲ್ಲಿರಿಸಿ ಸಂಜ್ಞಾ ತಪಸ್ಸಿಗೆ ತೆರಳಿದ್ದಾಳೆಂದು ಹೇಳುತ್ತಾಳೆ. ತನ್ನ ಮಡದಿಯ ಪ್ರತಿರೂಪವಾದ ಈ ನೆರಳನಾರಿಯ ಜೊತೆಗಿನ ಮ್ರುಲಾಟ ಇನ್ನು ಸಾಕು ಎಂದು ಸೂರ್ಯನಿಗೆ ಅನ್ನಿಸುತ್ತದೆ.
ಜಗತ್ತಿಗೇ ಕಣ್ಣಿನಂತಿರುವ ಸೂರ್ಯನು ತನ್ನ ದಿವ್ಯ ದೃಷ್ಟಿಯಿಂದ ತನ್ನ ಮೂಲ ಮಡದಿ ಇರುವ ತಾಣವನ್ನು ನೋಡುತ್ತಾನೆ. ಅವಳು ಕುದುರೆ ರೂಪದಿಂದ ತನ್ನ ಪತಿಯನ್ನೇ ಕುರಿತು ತಪಸ್ಸು ಮಾಡುತ್ತಿರುತ್ತಾಳೆ. ತಾನೂ ಗಂಡು ಕುದುರೆಯ ರೂಪ ಧರಿಸಿ ಸಂಜ್ಞಾಳ ಹತ್ತಿರ ಬರುತ್ತಾನೆ. ಗಂಡನನ್ನು ಕಂಡ ಕುದುರೆ ರೂಪದಲ್ಲಿದ್ದ ಸಂಜ್ಞಾ ಹರ್ಷಭರಿತಲಾಗುತ್ತಾಳೆ. ಗಂಡ ಹೆಂಡತಿಯ ಪುನರ್ಮಿಲನವಾಗುತ್ತದೆ. ಅವರ ರಾಗರತಿಯ ಫಲವಾಗಿ ಮೂವರು ಮಕ್ಕಳು ಜನಿಸುತ್ತಾರೆ. ಅವಳಿಜವಳಿಗಳಾದ ಅಶ್ವಿನಿ ದೇವತೆಗಳು ಹಾಗೂ ಮೂರನೆಯ ಮಗ ರೇತಸ.
ಅನಂತರ ಸೂರ್ಯದೇವನು ತನ್ನ ಮಡದಿಗೆ ಮೂಲರೂಪ ಧರಿಸಲು ಹೇಳಿ ಅವಳನ್ನು ಕರೆದುಕೊಂಡು ತನ್ನ ಲೋಕಕ್ಕೆ ಬರುತ್ತಾನೆ. ಮಾವ ವಿಶ್ವಕರ್ಮನಿಗೆ ವಿಷಯ ತಿಳಿದು ಚಿಂತೆಗೊಳಗಾಗುತ್ತಾನೆ. ತನ್ನ ಮಗಳೋ ಮೇಣದ ಗೊಂಬೆ ಆದರೆ ಅಳಿಯನೂ ಬೆಂಕಿಯ ಬಣವೆ. ಇದನ್ನು ಸರಿಪಡಿಸಲು ಅವನು ಉಪಾಯವೊಂದನ್ನು ಕಂಡುಹಿಡಿಯುತ್ತಾನೆ. ಹೇಳಿಕೇಳಿ ಅವನು ಸ್ವರ್ಗಲೋಕದ ಬಡಗಿ. ಸೂರ್ಯದೇವನ ಹೆಚ್ಚಿನ ತೆಜಸ್ಸನ್ನೆಲ್ಲಾ ತನ್ನ ಗಾಡಕ್ಕೆ ಹಾಕಿ ಸಾಣೆ ಹಿಡಿಯತೊಡಗುತ್ತಾನೆ. ಸೂರ್ಯನ ವಿರಾಟ್ ಕಾಯವನ್ನೆಲ್ಲ ಕೊರೆದು ತೆಗೆದು ಎಂಟನೆಯ ಒಂದಂಶಕ್ಕೆ ಇಳಿಸುತ್ತಾನೆ. ಹೀಗೆ ವಿಷ್ಣುವಿನ ಸಂಕಲ್ಪದಂತೆ ವಿಶ್ವಕರ್ಮನ ಬೃಹದ್ ಯಂತ್ರದಲ್ಲಿ ಸೂರ್ಯನ ತೆಜೋಗೊಲಕವು ಹದಗೊಂಡು ಸೌಮ್ಯವಾಗುತ್ತದೆ.
ಸಂಜ್ಞಾ ಒಂದು ಉಪಾಯವನ್ನು ಮಾಡುತ್ತಾಳೆ. ತನ್ನ ನೆರಳಿನಿಂದ ಪ್ರತಿರೂಪವೊಂದನ್ನು ಮಾಡಿ ಅದಕ್ಕೆ ಜೀವ ತುಂಬಿ ತನ್ನ ಸ್ಥಾನದಲ್ಲಿ ಅವಳನ್ನು ಬಿಟ್ಟು ತಾನು ತಪಸ್ಸು ಮಾಡಲು ಗುಟ್ಟಾಗಿ ತೆರಳುತ್ತಾಳೆ. ಸಂಜ್ಞೆಯ ನೆರಳು ಛಾಯಾ ಸ್ವಾಭಾವಿಕವಾಗಿ ಅವಳಂತೆಯೇ ಇರುತ್ತಾಳೆ. ಆದ್ದರಿಂದ ಸೂರ್ಯನಿಗೆ ಸ್ವಲ್ಪವೂ ಸಂಶಯ ಬರುವುದಿಲ್ಲ. ಅವನು ಛಾಯಾದೇವಿಯೊಂದಿಗೆ ಸರಸದಿಂದಲೇ ಸಂಸಾರ ಮಾಡುತ್ತಾನೆ. ಛಾಯಾದೇವಿಗೆ ಸೂರ್ಯನಿಂದ ಮೂವರು ಮಕ್ಕಳು ಹುಟ್ಟುತ್ತಾರೆ. ಮೊದಲನೆಯವ ಶನಿ, ಎರಡನೆಯವ ಮತ್ತೊಬ್ಬ ಮನು ಮೂರನೆಯವಳು ತಪತಿ. ಈ ಮನು ತನ್ನ ಅಣ್ಣ ಮನುವನ್ನೇ ಸಂಪೂರ್ಣ ಹೋಲುತ್ತಿದ್ದರಿಂದ ಇವನ್ನು ಸಾವರ್ಣಿಮನು ಎಂದು ಕರೆಯಲಾಗುತ್ತದೆ.
ಛಾಯಾದೇವಿಯು ತನಗೆ ಮಕ್ಕಳಾಗುವವರೆಗೆ ಸವತಿಯ ಮಕ್ಕಳನ್ನು ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದಳು. ತನಗೂ ಮಕ್ಕಳಾದ ಮೇಲೆ ಸಂಜ್ಞೆಯ ಮಕ್ಕಳನ್ನು ಅಸಡ್ಡೆಯಿಂದ ನೋಡಲಾರಂಭಿಸುತ್ತಾಳೆ. ಒಂದು ಸಲ ತನ್ನ ಮಕ್ಕಳೂ ಸವತಿಯ ಮಕ್ಕಳೂ ಜಗಳ ಮಾಡಲಾರಂಭಿಸಿದಾಗ ಸಾರಾಸಾರ ವಿಚಾರ ಮಾಡದೆ ತನ್ನ ಸ್ವಂತ ಮಕ್ಕಳ ಪರವಾಗಿ ನಿಂತು ಮಲಮಗ ಯಮನನ್ನು ಚೆನ್ನಾಗಿ ದಂಡಿಸಿ ಶಾಪ ಕೊಟ್ಟುಬಿಡುತ್ತಾಳೆ.
ಪ್ರಸಂಗ ಶಾಪ ಕೊಡುವಷ್ಟು ವಿಕೋಪಕ್ಕೆ ಹೋದಾಗ ಸೂರ್ಯನಿಗೆ ಸಂಶಯ ಬರುತ್ತದೆ. ಸ್ವಂತ ಮಗನಿಗೆ ಕೇಡು ಬಯಸಿ ಯಾರಾದರೂ ಶಾಪ ಕೊಡುವುದು ಉಂಟೆ? ಇವಳು ಯಮನಿಗೆ ತಾಯಿಯೇ ಆಗಿರಲಿಕ್ಕಿಲ್ಲವೆಂದುಕೊಂಡು ಅವಳನ್ನು ಗದರಿಸಿ ಕೇಳಿದಾಗ ಛಾಯಾದೇವಿಯು ನಡೆದ ಸಮಾಚಾರವನ್ನು ವಿವರವಾಗಿ ತಿಳಿಸಿಬಿಡುತ್ತಾಳೆ. ಬೆಂಕಿಯ ಬೆಟ್ಟದಂತಿರುವ ನಿಮ್ಮ ಉರಿಯ ಅಪ್ಪುಗೆಯಿಂದ ತಪ್ಪಿಸಿಕೊಳ್ಳಲು ನನ್ನನ್ನು ಇಲ್ಲಿರಿಸಿ ಸಂಜ್ಞಾ ತಪಸ್ಸಿಗೆ ತೆರಳಿದ್ದಾಳೆಂದು ಹೇಳುತ್ತಾಳೆ. ತನ್ನ ಮಡದಿಯ ಪ್ರತಿರೂಪವಾದ ಈ ನೆರಳನಾರಿಯ ಜೊತೆಗಿನ ಮ್ರುಲಾಟ ಇನ್ನು ಸಾಕು ಎಂದು ಸೂರ್ಯನಿಗೆ ಅನ್ನಿಸುತ್ತದೆ.
ಜಗತ್ತಿಗೇ ಕಣ್ಣಿನಂತಿರುವ ಸೂರ್ಯನು ತನ್ನ ದಿವ್ಯ ದೃಷ್ಟಿಯಿಂದ ತನ್ನ ಮೂಲ ಮಡದಿ ಇರುವ ತಾಣವನ್ನು ನೋಡುತ್ತಾನೆ. ಅವಳು ಕುದುರೆ ರೂಪದಿಂದ ತನ್ನ ಪತಿಯನ್ನೇ ಕುರಿತು ತಪಸ್ಸು ಮಾಡುತ್ತಿರುತ್ತಾಳೆ. ತಾನೂ ಗಂಡು ಕುದುರೆಯ ರೂಪ ಧರಿಸಿ ಸಂಜ್ಞಾಳ ಹತ್ತಿರ ಬರುತ್ತಾನೆ. ಗಂಡನನ್ನು ಕಂಡ ಕುದುರೆ ರೂಪದಲ್ಲಿದ್ದ ಸಂಜ್ಞಾ ಹರ್ಷಭರಿತಲಾಗುತ್ತಾಳೆ. ಗಂಡ ಹೆಂಡತಿಯ ಪುನರ್ಮಿಲನವಾಗುತ್ತದೆ. ಅವರ ರಾಗರತಿಯ ಫಲವಾಗಿ ಮೂವರು ಮಕ್ಕಳು ಜನಿಸುತ್ತಾರೆ. ಅವಳಿಜವಳಿಗಳಾದ ಅಶ್ವಿನಿ ದೇವತೆಗಳು ಹಾಗೂ ಮೂರನೆಯ ಮಗ ರೇತಸ.
![]() |
| ಗುಜರಾತ್ ನ ವಧೆರಾದಲ್ಲಿರುವ ಸೂರ್ಯ ದೇವಾಲಯ |
ಹೀಗೆ ಉದುರಿಬಿದ್ದ ತೇಜಸ್ಸಿನ ಖಂಡ ತುಂಡುಗಳನ್ನು ಆಯ್ದುಕೊಂಡ ವಿಶ್ವರ್ಮನು ವಿಷ್ಣುವಿನ ಸಲುವಾಗಿ ಸುದರ್ಶನ ಚಕ್ರವನ್ನು ಮಾಡಿಕೊಡುತ್ತಾನೆ. ಉಳಿದ ಚೂರುಗಳಿಂದ ಶಿವನಿಗೆ ತ್ರಿಶೂಲವನ್ನೂ, ಸ್ಕಂದನ ಶಕ್ತಿ ಆಯುಧವನ್ನೂ, ಕುಬೇರನಿಗೆ ಪುಷ್ಪಕ ವಿಮಾನವನ್ನೂ, ಉಳಿದ ತೆಜಸೀನ ಕಿಡಿಗಳಿಂದ ಎಲ್ಲ ದೇವತೆಗಳಿಗೆ ಶಸ್ತ್ರಾಸ್ತ್ರಗಳನ್ನೂ ತಯಾರಿಸಿಕೊಡುತ್ತಾನೆ. ಹೀಗೆ ಸೂರ್ಯದೇವನು ಸೌಮ್ಯನಾಗಿ ದೇವತೆಗಳೆಲ್ಲ ವಿವಿಧ ಆಯುಧಗಳನ್ನು ಹೊಂದಿ ತೇಜೋವಂತರಾಗುತ್ತಾರೆ. ಛಾಯಾದೇವಿಯು ಅಂತರ್ಧಾನಳಾಗಿ ತನ್ನ ಮೂಲರೂಪವಾದ ಸಂಜ್ಞಾದೇವಿಯಲ್ಲಿ ಲೀನವಾಗಿಬಿದುತ್ತಾಳೆ.


Wow super ಚೆನ್ನಾಗಿದೆ
ಪ್ರತ್ಯುತ್ತರಅಳಿಸಿBahala tumba intresting. Agide ,
ಪ್ರತ್ಯುತ್ತರಅಳಿಸಿSuper, fantastick
Movie maadi sir
ಪ್ರತ್ಯುತ್ತರಅಳಿಸಿ